ಅನ್ನಪುರ್ಣ ನೇಪಾಳದಲ್ಲಿನ ಹಿಮಾಲಯದ ಮಧ್ಯಭಾಗದಲ್ಲಿರುವ ಒಂದು ಉನ್ನತಪರ್ವತಶ್ರೇಣಿ: ಕಾಳಿ, ಗಂಡಕಿ ಮತ್ತು ಮರ್ಯಾಂದಿ ನದೀಕಣಿವೆಗಳ ಮಧ್ಯಭಾಗದಲ್ಲಿದ್ದು, ಅನ್ನಪೂರ್ಣವೆಂಬ ಹಲವು ಉನ್ನತ ಶಿಖರಗಳಿಂದ ಕೂಡಿದೆ. == ಭೌಗೋಳಿಕ == ಅನ್ನಪೂರ್ಣ ಪರ್ವತಶ್ರೇಣಿಯು 7,200 (23,620 )ಗಿಂತ ಎತ್ತರದ ಆರು ಶೃಂಗಗಳನ್ನು ಹೊಂದಿದೆ.: ಕಡಿಮೆ ಪ್ರಾಮುಖ್ಯದ ಹಲವು ಶಿಖರಗಳು: ಅನ್ನಪೂರ್ಣ ಮಧ್ಯ (8,051 (26,414 )} ಅನ್ನಪೂರ್ಣ ಪೂರ್ವ (8,010 (26,280 )) ಅನ್ನಪೂರ್ಣ ಫಾಂಗ್ (7,647 (25,089 )) ಲಾಚೇನಲ್ ಶಿಖರ (7,140 (23,425 )) ಮಚ್ಛಾಪುಚ್ಛಾರೆ ಶಿಖರ (6,993 (22,943 )) ಹೀಂಚುಲಿ(6,441 (21,132 )) == ಅನ್ನಪೂರ್ಣ- == ಜಗತ್ತಿನ ಉತ್ತುಂಗ ಶಿಖರಗಳಲ್ಲಿ ಹನ್ನೊಂದನೆಯದು. 1950ರವರೆಗೆ ಅಸ್ತಿತ್ವ ತಿಳಿದಿರಲಿಲ್ಲ. ಯೂರೋಪಿಯನ್ ಪರ್ವತಾರೋಹಿಗಳು ಕಾಳಿ, ಗಂಡಕಿ ನದೀಕಣಿವೆಗಳ ವಾಯುವ್ಯ ದಿಕ್ಕಿಗಿರುವ ಧವಳಗಿರಿಯನ್ನು ಏರಲು ಹೊರಟು ದಾರಿಕಾಣದೆ ಅನ್ನಪೂರ್ಣ ಶಿಖರದ ಕಡೆ ಹೊರಟರು. ಆಗ ಅದೇ ಜಗತ್ತಿನ ಅತ್ಯುನ್ನತ ಶಿಖರವೆಂದು ಪರಿಗಣಿಸಲಾಯಿತು. == ಆರೋಹಣ == ಫ್ರಾನ್ಸಿನ ಮೊರಿಸ್ ಹರ್‍ಜಾಗ್ ಎಂಬುವನ ನೇತೃತ್ವದಲ್ಲಿ ಪ್ರೆಂಜ್ ಪರ್ವತಾರೋಹಿ ತಂಡ ಈ ಶಿಖರಾರೋಹಣದ ಹಾದಿಯಲ್ಲಿ ಐದು ಶಿಬಿರಗಳನ್ನು ಹೂಡಿ (ಅತ್ಯಂತ ಎತ್ತರದ ಶಿಬಿರಸ್ಥಾನ 24,600') 1950ರ ಜೂನ್ 3ನೆಯ ತಾರೀಖು ಹರ್‍ಜಾಗ್ ಮತ್ತು ಲೂಯಿಸೆ ಲಾಚೆನೆಲ್ ಶಿಖರದ ಉತ್ತುಂಗಸ್ಥಾನವನ್ನು ತಲುಪಿದರು. ಆದರೆ ಅವರೋಹಣಾವಧಿಯಲ್ಲಿ ತಂಡದ ನಾಯಕರು ದುರದೃಷ್ಟಕರ ಘಟನೆಗಳನ್ನು ಎದುರಿಸಬೇಕಾಯಿತು. ಆದರೂ ಅನ್ನಪೂರ್ಣ- ಹಿಮಾಲಯದ ಉನ್ನತ ಶಿಖರಗಳಲ್ಲೆಲ್ಲ ಮೊಟ್ಟಮೊದಲಬಾರಿಗೆ ಹತ್ತಲ್ಪಟ್ಟ ಉತ್ತುಂಗಶಿಖರ. ಎಚ್.ಬಿಲ್ಲರ್, ಎಚ್. ಸ್ಪೆಯಿನ್‍ಮೆಟ್ಜ್ ಮತ್ತು ಜೆ. ವೆಲೆನ್‍ಕಾಂಪ್ ಎಂಬುವರು 1955ನೆಯ ಮೇ 30ರಂದು ಅನ್ನಪೂರ್ಣ- ನ್ನು ಹತ್ತಿದರು. 1960ನೆಯ ಮೇ 17 ರಂದು ಜೆ.ಒ.ಎಮ್. ರಾಬಟ್ರ್ಸ್‍ನ ನೇತೃತ್ವದಲ್ಲಿ ಆರ್. ಗ್ರಾಂಟ್ ಮತ್ತು ಸಿ.ಜೆ. ಗೊನಿಂಗ್‍ಟನ್ ಎಂಬುವರು ಅನ್ನಪೂರ್ಣ-IIನ್ನು ಯಶಸ್ವಿಯಾಗಿ ಹತ್ತಿದರು. == ಛಾಯಾಂಕಣ == ಅನ್ನಪೂರ್ಣ == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == -. ()